Police Station Inauguration : ಸುರೇಬಾನ ನೂತನ ಪೊಲೀಸ್ ಠಾಣೆ ಉದ್ಘಾಟನಾ ಸಮಾರಂಭ

Police Station Inauguration : ಸುರೇಬಾನ ನೂತನ ಪೊಲೀಸ್ ಠಾಣೆ ಉದ್ಘಾಟನಾ ಸಮಾರಂಭ

Police Station Inauguration : ಸುರೇಬಾನ ನೂತನ ಪೊಲೀಸ್ ಠಾಣೆ ಉದ್ಘಾಟನಾ ಸಮಾರಂಭ

ರಾಮದುರ್ಗ: ತಾಲೂಕಿನ ಸುರೇಬಾನ, ಮನಿಹಾಳ,ಗೊಣ್ಣಾಗರ, ಸಂಗಳ, ಎಂ ಕಲ್ಲಾಪೂರ, ಎಂ ಖಾನಾಪೂರ, ಮುಳ್ಳೂರ, ಇಡಗಲ್ಲ, ಕಲಹಾಳ, ಸಂಗಳ ಹುಲಿಗೊಪ್ಪ ಹೀಗೆ 32 ಗ್ರಾಮಗಳನ್ನು ಒಳಗೊಂಡಂತಹ ಗ್ರಾಮಗಳ ಅನುಕೂಲಕ್ಕಾಗಿ ತಾಲೂಕಿನ ಸುರೇಬಾನದಲ್ಲಿ ನೂತನ ಪೊಲೀಸ್ ಠಾಣೆಯನ್ನು ಶಾಸಕರು ಹಾಗೂ ಸರ್ಕಾರಿ ಮುಖ್ಯ ಸಚೇತರಾದ ಅಶೋಕ ಪಟ್ಟಣ ಸಸಿಯ ನೆಡುವ ಮುಖಾಂತರ ಉದ್ಘಾಟಿಸಿದರು

ನಂತರ ಮಾತನಾಡಿದ ಅವರು ಕಳೆದ ಹತ್ತು ವರ್ಷಗಳ ಹಿಂದೆ ನಮ್ಮ ಅವಧಿಯಲ್ಲಿಯೇ ಪೊಲೀಸ್ ಠಾಣೆ ನಿರ್ಮಾಣ ಮಾಡಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಪ್ರಯತ್ನಿಸಿದ್ದೇವೆ ನಂತರ ಬಂದ ಬಿಜೆಪಿ ಸರಕಾರದ ಅವಧಿಯಲ್ಲಿ ಈ ಕೆಲಸ ವಿಳಂಬವಾಗಿತ್ತು ಇದೀಗ ಮತ್ತೆ ನಮ್ಮ ಅವಧಿಯಲ್ಲಿ ಸರಕಾರ ಬಂದಿದ್ದು ಮುಖ್ಯಮಂತ್ರಿಯವರ ಜೊತೆ ಮಾತನಾಡಿ ಸರ್ಕಾರ ಬಂದ ಆರು ತಿಂಗಳಲ್ಲಿಯೇ ಪೊಲೀಸ್ ಠಾಣೆ ನಿರ್ಮಾಣವಾಗಿರುವುದು ನಮ್ಮೆಲ್ಲರ ಹೆಮ್ಮೆಯ ವಿಷಯವಾಗಿದೆ ಎಂದರು.

JDS shows a calculated effort : ಚುನಾವಣೆಯಲ್ಲಿ ತಮಗೆ ಅನುಕೂಲವಾಗುವ ಮೈತ್ರಿಗಳನ್ನು ರಚಿಸುವತ್ತ

ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶೃತಿ ಎನ್ ಎಸ್ ಮಾತನಾಡಿ ನಾವು ನಿಮಗಾಗಿ ಇದ್ದೇವೆ ನಿಮ್ಮ ರಕ್ಷಣೆಯೇ ನಮ್ಮ ಆಧ್ಯ ಕರ್ತವ್ಯವಾಗಿದೆ ಆದ್ದರಿಂದ ಸಾರ್ವಜನಿಕರು ನಮ್ಮ ಜೊತೆ ಸಹಕಾರ ನೀಡಬೇಕು, ಎಲ್ಲರೂ ಸಂಚಾರ ನಿಯಮಗಳನ್ನು ಪಾಲನೆ ಮಾಡಬೇಕು ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್, ಸೀಟ್ ಬೇಲ್ಟ್ ಧರಿಸಬೇಕು ಎಂದರು.

ಈ ವೇಳೆ ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಡಾ. ಭೀಮಾಶಂಕರ ಗುಳೇದ ಮಾತನಾಡಿ ಈ ಭಾಗದ ಜನರ ಬಹು ದಿನಗಳ ಬೇಡಿಕೆಯಾದ ನೂತನ ಪೊಲೀಸ್ ಠಾಣೆ ನಿರ್ಮಾಣವಾಗಿದ್ದು 32 ಹಳ್ಳಿಗಳಿಗೂ ಅನುಕೂಲವಾಗಿದೆ ನಾವು ನಿಮ್ಮ ಜೊತೆಗೆ ಇದ್ದೇವೆ ನೀವು ನಮ್ಮ ಜೊತೆಗೆ ಕೈ ಜೋಡಿಸಿ ಸಹಕಾರ ನೀಡಿದ್ರೆ ಅಪರಾಧ ರಹಿತ ಸ್ವಸ್ಥ ಸಮಾಜವನ್ನು ನಿರ್ಮಿಸಲು ಸಾಧ್ಯವಾಗುತ್ತದೆ ಎಂದರು

ಈ ಸಂದರ್ಭದಲ್ಲಿ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಷ.ಬ್ರ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಅನ್ನದಾನೇಶ್ವರ ಹಿರೇಮಠ, ಮುಳ್ಳೂರ ಶ್ರೀ ಗುರುದೇವ ಸಮರ್ಥ ಶಿವಾನಂದ ಮಹಾ ಸ್ವಾಮಿಗಳು ಗುರುದೇವ ಆತ್ಮಾನಂದ ಪುಣ್ಯಾಶ್ರಮ, ಮನಿಹಾಳ, ಹಾಗೂ ಶ್ರೀ ಮ. ನಿ. ಪ್ರ.ಶಿವಮೂರ್ತಿ ಮಹಾಸ್ವಾಮಿಗಳು ಫಲಾಹಾರೇಶ್ವರ ಸಂಸ್ಥಾನ ಮಠ, ಅವರಾಧಿ ಪೂಜ್ಯರು ದಿವ್ಯ ಸಾನಿಧ್ಯ ವಹಿಸಿದ್ದರು.ಸುರೇಬಾನ ಗ್ರಾಮ ಪಂಚಾಯಿತಿ ಅಧ್ಯಕ್ಷರು ಪುಷ್ಪಾ ಸುಣಗಾರ, ಉಪಾಧ್ಯಕ್ಷರು ಬಸವ್ವ ಭಜಂತ್ರಿ, ಮನಿಹಾಳ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಣಮವ್ವ ಪಿಡ್ಡಣ್ಣವರ, ಉಪಾಧ್ಯಕ್ಷರು ಹಣಮವ್ವ ಪ್ಯಾಟಿ, ತಾಲೂಕಾ ದಂಡಾಧಿಕಾರಿ ಸುರೇಶ ಚವಲರ, ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಐನಾಪೂರ, ಹಾಗೂ ವಿವಿಧ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಸುತ್ತಮುತ್ತಲಿನ ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ :- ಬಸಯ್ಯ ಪುರಾಣಿಕ ಮಠ ರಾಮದುರ್ಗ

Comments

No comments yet. Why don’t you start the discussion?

    Leave a Reply

    Your email address will not be published. Required fields are marked *