Flash News

Flash News Karnataka: CM “ಕಡಕ್” warning: ಬೆಂಗಳೂರು

Flash News :we cannot punish our lower level staff….?

CM  Siddaramaiah Warn Senior Level Officers : ಸಿ ಎಂ ಸಿದ್ದರಾಮಯ್ಯ ಹಿರಿಯ ಅಧಿಕಾರಿಗಳಿಗೆ ಹೆಚ್ಚರಿಕೆ:Flash News 

ಸಿ.ಎಂ ಸಿದ್ದರಾಮಯ್ಯ

India vs Pakistan : ಭಾರತ ಸೋತಿದ್ದಷ್ಟು ಗೆದ್ದಿದ್ದಷ್ಟು?

ಬೆಂಗಳೂರು : ಹೌದು ನಿಜ. ಇನ್ನು ಮುಂದೆ ನಮ್ಮ ಕೆಳಗೆ ಕೆಲಸ ಮಾಡುವ ಯಾವುದೇ ಸಿಬ್ಬಂದಿಯನ್ನು ಅಧಿಕಾರದಿಂದ ಏನಾದರು ಕ್ರಮ ಕೈಗೊಂಡರೆ, ಶಿಕ್ಷೆ  ಹಿರಿಯ ಅಧಿಕಾರಿಳಿಗೆ ಬೀಳುತ್ತದೆ. 

ನಮ್ಮ ಸರ್ಕಾರ ಕೇವಲ‌ ಕೆಳ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಕ್ರಮ ಕೈಗೊಂಡು ಕೈ ತೊಳೆದುಕೊಳ್ಳುವುದಿಲ್ಲ, ಹಿರಿಯ ಅಧಿಕಾರಿಗಳ ಮೇಲೂ ಸಹ ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೆಚ್ಚರಿಕೆ ಕೊಟ್ಟಿದ್ದಾರೆ,ಮತ್ತು ಆಯಾ ಠಾಣಾ ವ್ಯಾಪ್ತಿಗಳಲ್ಲಿ ಅಕ್ರಮ ಕೆಲಸಗಳು, ಕಾನೂನು ಬಾಹಿರ ಸಂಘಟಿತ ಅಪರಾಧಗಳು ನಡೆಯುತ್ತಿದ್ದರೆ ಡಿಸಿಪಿ(DSP), ಎಸ್ ಪಿ(SP) ಮಟ್ಟದ ಅಧಿಕಾರಿಗಳ ಮೇಲೆ ಹೊಣೆ ಮಾಡಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

 

Health is Wealth : ಆರೋಗ್ಯವೇ ಮಹಾಭಾಗ್ಯ

ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಪೊಲೀಸ್ ವರಿಷ್ಠಾಧಿಕಾರಿಗಳ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡಿ ಸಿಎಂ, ” ಸುಳ್ಳು ಸುದ್ದಿ, ವದಂತಿಗಳ ಮೂಲಕ ಸಮಾಜದ ಶಾಂತಿ ಕದಡುವವರ ವಿರುದ್ಧ ಸ್ವಯಂ ಪ್ರೇರಿತ ಎಫ್ ಐ ಆರ್(FIR) ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು. ಸೂಕ್ಷ್ಮ ಪ್ರಕರಣಗಳಲ್ಲಿ ದೂರು ಕೊಡುವವರು ಬರಬೇಕೆಂದು ಕಾಯುತ್ತಾ ಕೂರಬಾರದು ಎನ್ನುವ ಎಚ್ಚರಿಕೆ ಕೂಡ ನೀಡಲಾಗಿದೆ ” ಎಂದು ತಿಳಿಸಿದರು.

ಹಿರಿಯ ಅಧಿಕಾರಿಗಳು ಜನ ಸಂಪರ್ಕಕ್ಕೆ ಸಿಗದೇ ಹೋದ ಸಂಧರ್ಭಗಳಲ್ಲಿ , ಜನ ಸ್ನೇಹಿ ಆಗದೇ ನಡೆದುಕೊಳ್ಳುವ ಅಧಿಕಾರಿಗಳ ವಿರುದ್ದ ಕೂಡ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಅನೈತಿಕ ಪೊಲೀಸ್ ಗಿರಿ ವಿಚಾರದಲ್ಲಿ ಸರ್ಕಾರ ಝೀರೋ ಟಾಲರೆನ್ಸ್‌(zero tolerance) ವಹಿಸಲಿದೆ ಎಂದು ಸ್ಪಷ್ಟವಾಗಿ ಹೆಚ್ಚರಿಕೆ ಕೊಟ್ಟರು.

ಅಂತು-ಇಂತು ಕೆಳ ಮಟ್ಟದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಲ್ಲಿ ಕರ್ನಾಟಕ ಮುಖ್ಯಮಂತ್ರಿಗಳು ಧೈರ್ಯ ತುಂಬಿದ್ದಾರೆ..

Flash News
ಪೋಲಿಸ್‌ ಸಿಬ್ಬಂದಿ

Ganesha Chaturti 2023 : ಗಣೇಶ ಚತುರ್ಥಿ2023

ಸಿಸಿಬಿ(CCB)ಯನ್ನು ಇನ್ನಷ್ಟು ಸದೃಢಗೊಳಿಸಲು 230 ಹೊಸ ಸಿಬ್ಬಂದಿಯರನ್ನು  ನೇಮಿಸಿಕೊಳ್ಳಲು ಒಪ್ಪಿಗೆ ನೀಡಲಾಗಿದೆ. ಸಿಬ್ಬಂದಿಗೆ ಅಗತ್ಯವಾದರೆ ಹೊಸ ಕಟ್ಟಡಗಳನ್ನು ಸಹ ಒದಗಿಸಲಾಗುವುದು ಎಂದರು.

Flash News
ಸಿ.ಎಂ ಸಿದ್ದರಾಮಯ್ಯ

Bigg Boss 10 Kannada 2023: Contestant list: Release Date

ಠಾಣೆಯ ಅಧಿಕಾರಿಗಳ ಗಮನಕ್ಕೆ ಬರದಂತೆ ಯಾವುದೇ ರೀತಿಯ ಅಪರಾಧಗಳಾಗಲಿ, ಕರಾಳ ದಂಧೆಗಳಾಗಲಿ ನಡೆಯಲು ಸಾಧ್ಯವಿಲ್ಲ. ಹಿರಿಯ ಅಧಿಕಾರಿಗಳು ಠಾಣೆಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸುವುದು ಕಡ್ಡಾಯ. ಪೊಲೀಸರು ದರ್ಪ,ಅಹಂಕಾರ ಬಿಟ್ಟು ಜನಸ್ನೇಹಿಯಾಗಿ ಕೆಲಸ ಮಾಡಬೇಕು. ಠಾಣೆಗೆ ಬರುವ ಬಡವರು, ಮತ್ತು ಸಾಮಾನ್ಯ ಜನರಿಗೆ ಪೊಲೀಸ್ ವ್ಯವಸ್ಥೆ ಬಗ್ಗೆ ಭರವಸೆ ಹುಟ್ಟುವ ರೀತಿಯಲ್ಲಿ ಇರುವ ಜನಸ್ನೇಹಿ ಪೊಲೀಸ್ ವ್ಯವಸ್ಥೆ ರೂಪಿಸಿ ಎಂದು ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ಗೃಹ ಸಚಿವರಾದ ಜಿ.ಪರಮೇಶ್ವರ್, ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಮತ್ತು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಸಭೆಯಲ್ಲಿ ಭಾಗವಹಿಸಿದ್ದರು. ಇನ್ನು ನಗರ ಪೊಲೀಸ್ ಆಯುಕ್ತರಾದ ದಯಾನಂದ್ ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು  ಸಹ ಗೋಷ್ಠಿಯಲ್ಲಿ ಹಾಜರಾಗಿದ್ದರು.

 

 

KARNATAKA “HOT” POLITICAL CRISIS:ತಮಿಳುನಾಡಿನ ಮೇಲೆ ಸಿದ್ದು ಗರಂ-ಗರಂ:

Mark Antony : ಸಿಲ್ಕ್ ಸ್ಮಿತ ಅವರನ್ನು ರಿಕ್ರಿಯೆಟ್‌ ಮಾಡಿದ ಕಾಲಿವುಡ್ .. ಮೂಲ ಟ್ವಿಸ್ಟ್ ಇಲ್ಲಿದೆ..

 

 

 

 

 

 

 

 

 

 

3 Comments

Leave a Reply

Your email address will not be published. Required fields are marked *