Fire accident in Iraq

Fire Accident in Iraq:ಮದುವೆ ಸಮಾರಂಭದಲ್ಲಿ ಭೀಕರ ಬೆಂಕಿ,ವಿವಾಹಿತ ದಂಪತಿಗಳೊಂದಿಗೆ 150 ಕ್ಕೂ ಹೆಚ್ಚು ಜನರು ಸಾವು

Fire Accident in Iraq:ಇರಾಕ್‌ನಲ್ಲಿ ಮದುವೆ ಸಮಾರಂಭವೊಂದರಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಮದುವೆ ಮಂಟಪದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ ನವ ದಂಪತಿಯೂ ಸೇರಿದ್ದಾರೆ ಎಂದು ವರದಿಯಾಗಿದೆ. ಈ ಘಟನೆಯ ಬಗ್ಗೆ ಮತ್ತಷ್ಟು ವರದಿ ಇಲ್ಲಿದೆ.

Asia Cup 2023 Final:ಏಷ್ಯನ್ ಕಪ್ 2023: India Wins Its 8th Asia Cup Title

Fire Accident in Iraq

ಇರಾಕ್ ನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಮದುವೆ ಸಮಾರಂಭ ನಡೆಯುತ್ತಿದ್ದ ಪಂಕ್ಷನ್ ಹಾಲ್ ನಲ್ಲಿ ಈ ದುರ್ಘಟನೆ ನಡೆದಿದೆ. ಸಮಾರಂಭದ ವೇಳೆ ಬೆಂಕಿ ಕಾಣಿಸಿಕೊಂಡು 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸತ್ತವರಲ್ಲಿ ನವ ದಂಪತಿಗಳು ಇದ್ದಾರೆ ಎಂದು ತೋರುತ್ತದೆ.

Kaveri water solution :ಕಾವೇರಿ ಜಲವಿವಾದವು ಕೇವಲ ಕಾನೂನು ಹೋರಾಟವಲ್ಲ

ಉತ್ತರ ಇರಾಕ್ ನ ನಿನೆವೆ ಪ್ರಾಂತ್ಯದ ಅಲ್ಹಮ್ದಾನಿಯಾ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಈ ದುರ್ಘಟನೆ ನಡೆದಿದೆ. ನಿನೆವೆಯ ಡೆಪ್ಯುಟಿ ಗವರ್ನರ್ ಹಸನ್ ಅಲ್-ಅಲ್ಲಾಕ್ ಪ್ರಕಾರ, ಸಮಾರಂಭದಲ್ಲಿ 1000 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಆದರೆ ಮಂಗಳವಾರ ರಾತ್ರಿ 10.45ರ ಸುಮಾರಿಗೆ (ಸ್ಥಳೀಯ ಕಾಲಮಾನ) ಫಂಕ್ಷನ್ ಹಾಲ್ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ವೇಗವಾಗಿ ಹರಡಿತು ಮತ್ತು 113 ಜನರು ಸಾವನ್ನಪ್ಪಿದರು. ಇನ್ನೂ 150 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರೆಲ್ಲರನ್ನೂ ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

Banning unhealthy foods in school premises:ಭಾರತದಲ್ಲಿನ ಶಾಲಾ ಆವರಣದಲ್ಲಿ ಅನಾರೋಗ್ಯಕರ ಆಹಾರಗಳನ್ನು ನಿಷೇಧಿಸುವುದು

Fire Accident in Iraq
Fire Accident in Iraq

ಮದುವೆ ಸಮಾರಂಭದಲ್ಲಿ ಪಟಾಕಿ ಸಿಡಿಸಿದ್ದು ಅಪಘಾತಕ್ಕೆ ಪ್ರಾಥಮಿಕ ಕಾರಣ. ಯಾವುದೇ ಮುಂಜಾಗ್ರತೆ ವಹಿಸದೆ ಪಟಾಕಿ ಸಿಡಿಸಿದ್ದರಿಂದ ಅವಘಡ ಸಂಭವಿಸಿದೆಯಂತೆ. ಪಂಕ್ಷನ್‌ ಹಾಲ್‌ನಲ್ಲಿದ್ದ ಸಾಮಗ್ರಿಗಳು ಬೇಗ ಹೊತ್ತಿ ಉರಿದಿದ್ದರಿಂದ ಸಮಾರಂಭದಲ್ಲಿ ಭಾಗವಹಿಸಿದ್ದವರು ಹೊರಗೆ ಹೋಗಲು ಸಾಧ್ಯವಾಗಲಿಲ್ಲ. ಸಾವಿನ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿ ಅವಘಡದ ಬಗ್ಗೆ ಮಾಹಿತಿ ಪಡೆದ ತಕ್ಷಣ ಪರಿಹಾರ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಮೃತರ ಸಂಖ್ಯೆ ಇನ್ನು ಹೆಚ್ಚಾಗುತ್ತಿದೆ ಎಂದು ಮಾಹಿತಿ ತಿಳಿದುಬರುತ್ತಿದೆ.

Bigg Boss 10 Kannada 2023: Contestant list: Release Date

https://7insidefacts.com/?amp=1

1 Comment

Leave a Reply

Your email address will not be published. Required fields are marked *